ಒಂದೇ ಕಾಲಿದ್ದರೂ ಚಿತ್ರರಂಗವನ್ನೇ ಗೆದ್ದ ತಾರೆ Sudha Chandran ಲವ್ ಸ್ಟೋರಿ ಇದು!

Video about sudha chandran in kannada

ಸುಧಾ ಚಂದ್ರನ್ (Sudha Chandran) ಇಂದು ಟಿವಿ ಮತ್ತು ಮನರಂಜನಾ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ‘ಕಹಿಂ ಕಿಸಿ ರೋಜ್’, ‘ನಾಗಿನ್’ , ‘ಝಲಕ್ ದಿಖ್ಲಾ ಜಾ’, ‘ಶಾದಿ ಕರ್ಕೆ ಫಸ್ ಗಯೇ ಯಾರ್’, ‘ಮಲಮಾಲ್ ವೀಕ್ಲಿ’, ‘ರಾಗ್’, ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’, ಮುಂತಾದ ಅನೇಕ ಟಿವಿ ಧಾರಾವಾಹಿಗಳಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾಮಿಡಿ, ಟ್ರ್ಯಾಜಡಿ, ಅತ್ತೆ, ಸೊಸೆ, ಸೀರಿಯಸ್​ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸುವ ಈ ನಟಿಯನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಅವರು ಒಂದು ಕಾಲನ್ನು ಸ್ವಲ್ಪ ಕುಂಟುತ್ತಾರೆ ಎಂದು. ಇದು ತುಂಬಾ ಸೂಕ್ಷ್ಮವಾಗಿ ಗಮನಿಸಿದವರಿಗೆ ಇಲ್ಲವೇ ಇವರ ಲೈಫ್​ ಟ್ರ್ಯಾಜಡಿ ಬಗ್ಗೆ ಅರಿತವರಿಗೆ ಮಾತ್ರ ತಿಳಿಯಲು ಸಾಧ್ಯ. ಇಲ್ಲದೇ ಹೋದರೆ ಎಲ್ಲವೂ ಸರಿಯಾಗಿಯೇ ಇದ್ದಂತೆ ಕಾಣುತ್ತದೆ. ಅದ್ಯಾಕೆ ಅವರು ಕಾಲನ್ನು ಕುಂಟುತ್ತಾರೆ ಎಂದು ನೀವು ಒಮ್ಮೊಮ್ಮೆ ಅಂದುಕೊಂಡಿರಲಿಕ್ಕೂ ಸಾಕು. ಇದು ಅವರ ಜೀವನದ ಕರಾಳ ಕಥೆ.

ಇದನ್ನೂ ಹೇಳುವ ಮುನ್ನ ನಟಿ ಸುಧಾ ಚಂದ್ರನ್​ ಅವರ ಕುರಿತು ಒಂದು ಮಾತು ಹೇಳಲೇ ಬೇಕು. ಇವರು ಚಿಕ್ಕಂದಿನಿಂದಲೂ ಅದ್ಭುತ ಶಾಸ್ತ್ರೀಯ ನೃತ್ಯಗಾತಿ, ಭರತನಾಟ್ಯ (Bharanatya) ಕಲಾವಿದೆ. ತಮ್ಮ ಭರತನಾಟ್ಯ ಕಾರ್ಯಕ್ರಮದ ಮೂಲಕ ದೇಶ-ವಿದೇಶಗಳಲ್ಲಿ ಸಂಚರಿಸಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ಹಲವಾರು ನಟಿಯರು ಇದ್ದಾರೆ, ತುಂಬಾ ಪ್ರಸಿದ್ಧಿ ಪಡೆದವರೂ ಇದ್ದಾರೆ. ಆದರೆ ಅವೆಲ್ಲರಿಗಿಂತ ಭಿನ್ನವಾಗಿ ನಿಲ್ಲುವವರು ಸುಧಾ ಚಂದ್ರನ್​. ಹೌದು! ಇದಕ್ಕೆ ಕಾರಣವೂ ಇದೆ. ಈಗ 58 ವರ್ಷ ವಯಸ್ಸಿನವರಾಗಿರುವ ಸುಧಾ ಅವರಿಗೆ ಒಂದು ಕಾಲೇ ಇಲ್ಲ ಎನ್ನುವ ಸತ್ಯ ನಿಮಗೆ ಗೊತ್ತೆ? ಅದೂ ಇಂದು ನಿನ್ನೆಯ ಕಥೆಯಲ್ಲ, ಬದಲಿಗೆ ದಶಕಗಳ ಹಿಂದಿನ ಮಾತು. ಅವರಿಗಿನ್ನೂ 17 ವರ್ಷ ವಯಸ್ಸು ಇರುವಾಗಲೇ ಒಂದು ಕಾಲನ್ನು ಕಳೆದುಕೊಂಡಿದ್ದಾರೆ ಈ ಕಲಾವಿದೆ!

ನಾನೊಬ್ಬ ಕೆಟ್ಟ ತಂದೆ… ಮಗನ ಎದುರು ಭಾವುಕರಾದ ನಟ Mithun Chakraborty

ಕೇಳಲು ಅಚ್ಚರಿ ಎನಿಸಿದರೂ ಇದು ಸತ್ಯ. 50ಕ್ಕೂ ಹೆಚ್ಚು ಹಿಂದಿ ಮತ್ತು ತಮಿಳು (Tamil) ಚಲನಚಿತ್ರಗಳಲ್ಲಿ ಕೆಲಸ ಮಾಡಿರೋ, ನೂರಾರು ಭರತನಾಟ್ಯ ಪ್ರದರ್ಶನಗಳನ್ನು ನೀಡಿರೋ ಈ ಕಲಾವಿದೆ 17ನೇ ವಯಸ್ಸಿನಲ್ಲಿ ಇರುವಾಗಲೇ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡವರು. 1981 ರಲ್ಲಿ, ಸುಧಾ ಚಂದ್ರನ್ ಅವರಿಗೆ 17 ವರ್ಷ ವಯಸ್ಸಾಗಿದ್ದಾಗ, ಅವರ ಒಂದು ಕಾಲಿಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ಸೋಂಕು ದೇಹದಾದ್ಯಂತ ಹರಡುವುದನ್ನು ತಡೆಯಲು ವೈದ್ಯರು ಅವರ ಒಂದು ಕಾಲನ್ನು ಕತ್ತರಿಸಿದ್ದರು. ಈಗ ಅವರಿಗೆ ಇರುವುದು ಮರದ ಕಾಲು!

ಇಷ್ಟಾದರೂ ಸುಧಾ ಚಂದ್ರನ್​ ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಮರದ ಕಾಲಿನಿಂದಲೇ ತಮ್ಮ ನೃತ್ಯ ತರಬೇತಿ ಮುಂದುವರೆಸಿದರು ಭರತನಾಟ್ಯದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. 1984 ರಲ್ಲಿ ಅವರು ತಮಿಳು ಚಿತ್ರ ‘ಮಯೂರಿ’ (Mayuri) ಮೂಲಕ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಅಸಲಿಗೆ ಈ ಚಿತ್ರವು ಅವರ ಜೀವನದಿಂದ ಸ್ಫೂರ್ತಿ ಪಡೆದ ಚಿತ್ರವಾಗಿದೆ. ಅಂದರೆ ಅವರದ್ದೇ ಕಥಾ ಹಂದರವನ್ನು (Story) ಹೊಂದಿರುವ ಚಿತ್ರ ಇದು. 1986ರಲ್ಲಿ ತಮಿಳಿನ ‘ಮಯೂರಿ’ ಹಿಂದಿ ರೀಮೇಕ್ ‘ನಾಚೆ ಮಯೂರಿ’ (Nache Mayuri) ಬಿಡುಗಡೆಯಾಗಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಿತ್ತು. ಮೊದಲ ಚಿತ್ರ ‘ನಾಚೆ ಮಯೂರಿ’ಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿತ್ತು. ಎರಡೂ ಚಿತ್ರಗಳಲ್ಲಿ ಕೆಲವು ಭರತನಾಟ್ಯದಂತಹ ಅನೇಕ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳನ್ನು ಸುಧಾ ನೀಡಿದ್ದರು. ಇದಾದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

‘ಶ್ರೀರಾಮ’ನೇ ಸ್ಮೋಕ್​ ಮಾಡಿದಾಗ… ಕಹಿ ಘಟನೆ ನೆನಪಿಸಿಕೊಂಡ ನಟ Arun Govil

ಅವರು 1992 ರಲ್ಲಿ ‘ಸೀತಾ-ಸಲ್ಮಾ-ಸೂಜಿ’ (Seeta Salma Sooji) ಚಿತ್ರದ ಸೆಟ್‌ನಲ್ಲಿ ಸಹಾಯಕ ನಿರ್ದೇಶಕ ರವಿ ಡ್ಯಾಂಗ್ ಅವರನ್ನು ಭೇಟಿಯಾದರು. ಮೊದಲ ನೋಟದಲ್ಲೇ ಇಬ್ಬರೂ ಪ್ರೀತಿಸತೊಡಗಿದರು. ‘ರವಿಯ ಪರಿಚಯವಾದಾಗ ನಾನು ಆ ಚಿತ್ರದಲ್ಲಿ ನಟಿಯಾಗಿದ್ದೆ. ಸಿನಿಮಾ ಮಾಡುವಾಗಲೇ ಪ್ರೀತಿಯಲ್ಲಿ ಬಿದ್ದು ನಂತರ ಮದುವೆಯಾಗಲು ನಿರ್ಧರಿಸಿದ್ದೆವು ಎಂದು ಸುಧಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಈ ಮದುವೆ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಆದರೆ ಸುಧಾ ಮತ್ತು ರವಿ ಧೈರ್ಯ ಕಳೆದುಕೊಳ್ಳಲಿಲ್ಲ, ಇಬ್ಬರೂ ತಮ್ಮ ಕುಟುಂಬದ ಸದಸ್ಯರನ್ನು ಎದುರು ಹಾಕಿಕೊಂಡು ಚೆಂಬೂರಿನ ದೇವಸ್ಥಾನದಲ್ಲಿ ತಮಿಳು ಪದ್ಧತಿಯಂತೆ ರಹಸ್ಯವಾಗಿ ಮದುವೆಯಾದರು (Marriage). ಮದುವೆಯ ನಂತರ ಇಬ್ಬರೂ ಸುಖವಾಗಿ ಬದುಕುತ್ತಿದ್ದಾರೆ.

“; } if((index == 2 || contentArray[index] == contentArray[contentArray.length – 1]) && ‘Kannada’ == ‘Kannada’){ console.log(“targetEl:”, contentArray[index], contentArray[contentArray.length – 1]); let TaboolaA = document.createElement(‘div’); TaboolaA.id=”taboola-video-reel-mid-article”; const eligibleElem = document.querySelector(‘.postbodyneww’).getElementsByTagName(‘p’)[index]; eligibleElem.appendChild(TaboolaA); } if(index == 3){ const eligibleElem = document.querySelector(‘.postbodyneww’).getElementsByTagName(‘p’)[index]; eligibleElem.innerHTML += ” “; } const item = contentArray[index] const paraLength = item.innerText.split(” “).length; checkLength = checkLength + paraLength; if(!showAdd){ if(checkLength>100) { let nextContentLength = 0; const nextPara = contentArray[index+1]; if(nextPara && nextPara.innerHTML && (nextPara.innerHTML.includes(‘ 30){ addAppend(index+1); } } else{ for(let ind = index+1; ind < contentArray.length; ind++){ nextContentLength = nextContentLength + contentArray[ind].innerText.split(” “).length; } if(nextContentLength > 30){ addAppend(index); } } /*break;*/ } } } } else{ var contentArray = document.querySelector(‘.postbodyneww’).getElementsByTagName(‘p’) || []; for(var index = 0; index < contentArray.length; index++){ if(index == 1){ const nodeA = document.querySelector(“.newDesktopStoryAdBox”); const eligibleElem = document.querySelector(‘.postbodyneww’).getElementsByTagName(‘p’)[index]; eligibleElem.appendChild(nodeA); document.querySelector(“.newDesktopStoryAdBox”).style.display = ‘flex’; } if((index == 2 || contentArray[index] == contentArray[contentArray.length – 1]) && ‘Kannada’ == ‘Kannada’){ console.log(“targetEl:”, contentArray[index], contentArray[contentArray.length – 1]); let TaboolaA = document.createElement(‘div’); TaboolaA.id=”taboola-video-reel-mid-article”; const eligibleElem = document.querySelector(‘.postbodyneww’).getElementsByTagName(‘p’)[index]; eligibleElem.appendChild(TaboolaA); break; } } }